ಹಲಸಂಗಿ ಗ್ರಾಮದಲ್ಲಿ ಜರುಗಿದ್ದ ಸುಲಿಗೆ ಪ್ರಕರಣ ಭೇದಿಸಿ ಆರೋಪಿಗಳ ಬಂಧನ

ದಿನಾಂಕ: 26.01.2026 ರಂದು ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ವಿಜಯಪುರ ಜಿಲ್ಲೆಯ ಝಳಕಿ ಪೊಲೀಸ ಠಾಣಾ ವ್ಯಾಪ್ತಿಯ ಹಲಸಂಗಿ ಗ್ರಾಮದಲ್ಲಿರುವ ಮಹಾರುದ್ರ ತಂ. ಸದಾಶಿವ ಕಂಚಗಾರ ಸಾ: ಹಲಸಂಗಿ ಇವರ ʼಭೂಮಿಕಾ ಜ್ಯುವೆಲ್ಲರಿʼ ಬಂಗಾರದ ಅಂಗಡಿಗೆ ಯಾರೋ ಇಬ್ಬರೂ ಆರೋಪಿತರು ಮುಖಕ್ಕೆ ಕಪ್ಪು ಬಟ್ಟೆ & ಹೆಲ್ಮೇಟ್ ಹಾಕಿಕೊಂಡು ತಮ್ಮ ಚಹರೆಪಟ್ಟಿ ಮರೆ ಮಾಚಿ ಕಪ್ಪು ಬಣ್ಣದ ಯುನಿಕಾರ್ನ ಮೋಟಾರ್ ಸೈಕಲ್ ಮೇಲೆ ಬಂದು ತಮ್ಮ ಹತ್ತಿರವಿದ್ದ ಪಿಸ್ತೂಲ್ವನ್ನು ತೋರಿಸಿ, ಅಂಗಡಿಯಲ್ಲಿದ್ದ 

-    205 ಗ್ರಾಂ ಬಂಗಾರದ ಆಭರಣಗಳು 
-    1 ಕೆಜಿ ಬೆಳ್ಳಿಯ ಆಭರಣಗಳು 

ಹೀಗೆ ಒಟ್ಟು 22 ಲಕ್ಷ ರೂಪಾಯಿ ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ವಸ್ತುಗಳನ್ನು ಸುಲಿಗೆ ಮಾಡಿಕೊಂಡು, ಹೋಗುವ ಸಮಯದಲ್ಲಿ ಬಂಗಾರದ ಅಂಗಡಿ ಪಕ್ಕದಲ್ಲಿ ನಿಂತಿದ್ದ ಸಾರ್ವಜನಿಕರ ಕಡೆಗೆ ಪಿಸ್ತೂಲ್ದಿಂದ ಗುಂಡು ಹಾರಿಸಿ, ಗಾಯಗೊಳಿಸಿ ಸುಲಿಗೆ ಮಾಡಿದ ಮಾಲಿನ ಸಮೇತ ತಮ್ಮ ಮೋಟಾರ್ ಸೈಕಲ್ ಮೇಲೆ ಹೋಗಿದ್ದು, ಈ ಘಟನೆ ಬಗ್ಗೆ ಅಂಗಡಿ ಮಾಲೀಕರಾದ ಮಹಾರುದ್ರ ತಂ. ಸದಾಶಿವ ಕಂಚಗಾರ ಸಾ: ಹಲಸಂಗಿ ಇವರು ನೀಡಿದ ದೂರಿನ ಮೇರೆಗೆ ದಿನಾಂಕ: 26.01.2026 ರಂದು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ಸಂಖ್ಯೆ. 10/2026 U/s 311 BNS-2023 & 25, 27 Arms Act-1959 ಅಡಿ ಪ್ರಕರಣ ದಾಖಲಾಗಿರುತ್ತದೆ. 

ಸದರಿ ಪ್ರಕರಣವು ಅತ್ಯಂತ ಗಂಭೀರವಾದ ಸುಲಿಗೆ ಪ್ರಕರಣವಾಗಿದ್ದು, ಇದರಲ್ಲಿ ಆರೋಪಿತರು ತಮ್ಮ ಚಹರೆಪಟ್ಟಿ ಮರೆ ಮಾಚಿಕೊಂಡು ಹಗಲು ಹೊತ್ತಿನಲ್ಲಿಯೇ ಕೃತ್ಯ ಎಸಗಿದ್ದು, ಪ್ರಕರಣದ ಪತ್ತೆ ಕಾರ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಆರೋಪಿತರ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ಲಕ್ಷ್ಮಣ ನಿಂಬರಗಿ  ಮಾರ್ಗದರ್ಶನದಲ್ಲಿ,  ಶ್ರೀ ರಾಮನಗೌಡ. ಅ. ಹಟ್ಟಿ, ಹೆಚ್ಚುವರಿ ಪೊಲೀಸ ಅಧೀಕ್ಷಕರು, ವಿಜಯಪುರ ಇವರ ಮೇಲ್ವಿಚಾರಣೆಯಲ್ಲಿ 1) ಶ್ರೀ ಸದಾಶಿವ ಕಟ್ಟೀಮನಿ, ಡಿಎಸ್ಪಿ ಇಂಡಿ ಉಪವಿಭಾಗ 2) ಶ್ರೀ ಸುನೀಲ ಕಾಂಬಳೆ, ಡಿಎಸ್ಪಿ ಸಿಇಎನ್ ಪೊಲೀಸ ಠಾಣೆ ಇವರುಗಳ ಪ್ರತ್ಯೇಕ ನೇತೃತ್ವದಲ್ಲಿ 1) ಶ್ರೀ ಪರಶುರಾಮ ಮನಗೂಳಿ, ಸಿಪಿಐ ಚಡಚಣ ವೃತ್ತ 2) ಶ್ರೀ ಮಂಜುನಾಥ ತಿರಕ್ಕನ್ನವರ, ಪಿಎಸ್ಐ ಝಳಕಿ ಪೊಲೀಸ ಠಾಣೆ 3) ಸೋಮೇಶ ಗೆಜ್ಜಿ, ಪಿಎಸ್ಐ ಚಡಚಣ ಠಾಣೆ 4) ಶ್ರೀ ರಾಕೇಶ ಬಗಲಿ, ಪಿಎಸ್ಐ ಹೊರ್ತಿ ಪೊಲೀಸ ಠಾಣೆ ಹಾಗೂ ಕ್ರೈಂ, ತಾಂತ್ರಿಕ ಸಿಬ್ಬಂದಿ ಜನರನ್ನೊಳಗೊಂಡಂತೆ 02 ಪ್ರತ್ಯೇಕ ತಂಡಗಳನ್ನು ರಚನೆ ಮಾಡಿ ಆರೋಪಿತರ ಪತ್ತೆ ಕಾರ್ಯ ವಹಿಸಲಾಗಿತ್ತು.   
    ಸದರಿ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ತನಿಖೆ ಕೈಕೊಂಡು, ಘಟನೆ ನಡೆದ ದಿನದ ತಾಂತ್ರಿಕ ಕುರುಹು ಸೇರಿದಂತೆ ಇತರೆ ತಾಂತ್ರಿಕ ಕುರುಹುಗಳ ಜೊತೆಗೆ ಸ್ಥಳೀಯವಾಗಿ ಕಂಡು ಬಂದ ಸಾಕ್ಷಿ ಪುರಾವೆಗಳನ್ನು ಗುರುತಿಸಿ ಎಲ್ಲ ಆಯಾಮಗಳಿಂದ ತನಿಖೆ ಕೈಕೊಂಡಿದ್ದು ಆ ಕಾಲಕ್ಕೆ ಈ ಕೆಳಗಿನ ಆರೋಪಿತರಾದ 


1)    ಹಣಮಂತ ತಂ. ಮಲ್ಲಪ್ಪ ವಾಘೋಲಿ, 28 ವರ್ಷ, ಡೈರಿ ವ್ಯಾಪಾರ, ಸಾ: ಸಂಖ ತಾ: ಜತ್ತ ಸಧ್ಯ ರಘುನಂದನ ಮಂಗಲ ಕಾರ್ಯಾಲಯ ಲೊಂಡೆ ವಸತಿ, ಮೋರಯ್ಯ ಕಾಲೋನಿ ಪಿಂಪ್ರಿ ಚಿಂಚವಾಡ ಪೂನಾ, ಮಹಾರಾಷ್ಟ್ರ ರಾಜ್ಯ 


2)    ಶಿವರಾಜ್ @ ಗೌಡಪ್ಪ ತಂ. ರಾವುಸಾಹೇಬ ನಾವಿ, 28 ವರ್ಷ, ಚಾಲಕ ವೃತ್ತಿ ಸಾ: ಸಂಖ ತಾ: ಜತ್ತ ಮಹಾರಾಷ್ಟ್ರ ರಾಜ್ಯ, ಹಾಲಿ ಲಾಳಸಂಗಿ ತಾ: ಇಂಡಿ ಜಿ: ವಿಜಯಪುರ ಸಧ್ಯ ನಿಗಡಿ ಯಮುನಾ ನಗರ ಪೂನಾ, ಮಹಾರಾಷ್ಟ್ರ ರಾಜ್ಯ 

ಇವರುಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದು ವಿಚಾರಣೆ ಕೈಕೊಂಡಿದ್ದು, ಆ ಕಾಲಕ್ಕೆ ಸದರಿಯವರು ಕೃತ್ಯ ಎಸಗಿದ ಬಗ್ಗೆ ಒಪ್ಪಿಕೊಂಡಿದ್ದು ಅಲ್ಲದೇ ಸುಲಿಗೆ ಮಾಡಿದ್ದ  

-    205 ಗ್ರಾಂ ಬಂಗಾರದ ಆಭರಣಗಳು 
-    1 ಕೆಜಿ ಕೆಜಿ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 22,00,000/- ರೂ 
-    ಕೃತ್ಯದ ಕಾಲಕ್ಕೆ ಬಳಸಿದ ಕಂಟ್ರಿ ಪಿಸ್ತೂಲ್ ಸೇರಿದಂತೆ ಒಟ್ಟು 03 ಕಂಟ್ರಿ ಪಿಸ್ತೂಲ್ಗಳು, 
-    26 ಜೀವಂತ ಗುಂಡುಗಳು 
-    ಒಂದು ಏರಗನ್ 
-    ಹೊಂಡಾ ಕಂಪನಿಯ ಯುನಿಕಾರ್ನ ಮೋಟಾರ್ ಸೈಕಲ್, ಮಾಸ್ಕ, ಜಾಕೇಟ್, ಹೆಲ್ಮೇಟ್, ಹ್ಯಾಂಡ್ಗ್ಲೌಸ್, ಧರಿಸಿದ ಬಟ್ಟೆಗಳು 


ಈ ಪ್ರಕಾರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. 
ಸದರಿ ಪ್ರಕರಣವನ್ನು ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ತಮ್ಮ ಅವಿರತ ಪ್ರಯತ್ನ, ತಾಂತ್ರಿಕ ನೈಪುಣ್ಯತೆ, ತನಿಖಾ ಕೌಶಲ್ಯಗಳನ್ನು ಬಳಸಿ ಘಟನೆ ನಡೆದ ಕೇವಲ 20 ದಿವಸಗಳ ಅವಧಿಯಲ್ಲಿಯೇ ಆರೋಪಿತರನು ಪತ್ತೆ ಮಾಡಿದ್ದು, ಸದರಿಯವರ ಈ ಕರ್ತವ್ಯವನ್ನು ಶ್ಲಾಘಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು,ಲಕ್ಷ್ಮಣ ನಿಂಬರಗಿ ತನಿಖಾ ತಂಡದ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.